ಸಂಯುಕ್ತ ಹೊರನಾಡ್(ಸಂಯುಕ್ತ ಬೆಳವಾಡಿ) (ಹುಟ್ಟು: ೨೩ ಮೇ ೧೯೯೧) ಭಾರತೀಯ ಚಲನ ಚಿತ್ರ ಕಲಾವಿದೆ. ಕನ್ನಡ ಚಲನ ಚಿತ್ರರಂಗದಲ್ಲಿ ಅಭಿನೇತ್ರಿ. "ಲೈಫು ಇಷ್ಟೇನೇ" ಎನ್ನುವ ಕನ್ನಡ ಚಿತ್ರದಿಂದ ಸಿನೆಮಾರಂಗಕ್ಕೆ ಪಾದಾರ್ಪಣೆಮಾಡಿದ ಸಂಯುಕ್ತ, ತನ್ನ ಮೊದಲನೇ ಚಿತ್ರದಲ್ಲೇ ಯಶಸ್ಸು ಪಡೆದು ಹೆಸರು ಗಳಿಸಿದಳು. ೨೦೧೩ ರಲ್ಲಿ ದಕ್ಷಿಣ ಭಾರತದಿಂದ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಳು.() == ಪ್ರಾರಂಭಿಕ ಜೀವನ == ಸಂಯುಕ್ತ ಹೊರನಾಡು, ಕರ್ನಾಟಕದ ಒಬ್ಬ ರೂಪದರ್ಶಿ () ಮತ್ತು ನಟಿಯೆಂದು ಪ್ರಸಿದ್ಧಿ ಹೊಂದಿದ್ದಾರೆ. ಪದವಿ ಶಿಕ್ಷಣ (ಮೀಡಿಯಾ)ವನ್ನು ಇಂಗ್ಲಿಷ್ ಹಾಗೂ ಮನಸ್ಶಾಸ್ತ್ರದಲ್ಲಿ ಮಾಡಿದ್ದಾಳೆ. ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಕಿರುತೆರೆಯ ಕಾರ್ಯಕ್ರಮ ನಿರೂಪಕಿಯಾಗಿ (ಆಂಕರ್) ಆಗಿ ಪ್ರಾರಂಭಿಸಿದ ಸಂಯುಕ್ತ, ನಂತರ ಅಭಿನಯದ ಕಡೆ ಹೊರಳಿದರು. ===== ಸಂಯುಕ್ತ ಹೊರನಾಡ್ ಅಭಿನಯಿಸಿದ ಚಿತ್ರಗಳು ===== ಮೊದಲ ಚಿತ್ರ, ಆ ದಿನಗಳು ಎರಡನೆಯ ಚಿತ್ರ ಲೈಫ್ ಇಷ್ಟೇನೆ (೨೦೧೧) ಪ್ರಕಾಶ್ ರಾಜ್ ಜೊತೆಗೆ ನಟಿಸಿದ ೩ ಭಾಷೆಗಳಲ್ಲಿ ತಯಾರಾದ (ತಮಿಳು) ಉನ್ ಸಮಯಲ್ ಅರಯಿಲ್, (ತೆಲುಗು), ಒಗ್ಗರಣೆ (ಕನ್ನಡ) ಜಿಗರ್ ತಂಡ - ರಾಜ್ಯ ಪ್ರಶಸ್ತಿ ಗಳಿಸಿದ ಚಿತ್ರ ಮಾರಿಕೊಂಡವರು ದಯವಿಟ್ಟು ಗಮನಿಸಿ ಅರಿಷಡ್ವರ್ಗ ಕಾಫಿ ತೋಟ ಬರ್ಫಿ (೨೦೧೧) == ಉಲ್ಲೇಖಗಳು ==